ಧಾರವಾಡ: 'ವೇದ ಕನ್ನಡ ನ್ಯೂಸ್' ಡಿಜಿಟಲ್ ಸುದ್ದಿ ಸಂಸ್ಥೆಗೆ ಅಧಿಕೃತ ಮಾನ್ಯತೆ ಪ್ರಕ್ರಿಯೆ ಚುರುಕು | ವಾರ್ತಾ ಇಲಾಖೆಗೆ ಅಪರ ಜಿಲ್ಲಾಧಿಕಾರಿಗಳ ಮಹತ್ವದ ಸೂಚನೆ.
ಧಾರವಾಡ (ವೇದ ಕನ್ನಡ ನ್ಯೂಸ್): ಧಾರವಾಡ ಜಿಲ್ಲೆಯಲ್ಲಿ ಮುಂಚೂಣಿಯಲ್ಲಿ ಕಾರ್ಯಾಚರಿಸುತ್ತಿರುವ ಸ್ವತಂತ್ರ ಡಿಜಿಟಲ್ ಸುದ್ದಿ ಮಾಧ್ಯಮ ಸಂಸ್ಥೆಯಾದ ‘ವೇದ ಕನ್ನಡ ನ್ಯೂಸ್’ (Veda Kannada News) ಅನ್ನು ಸರ್ಕಾರದ ಅಧಿಕೃತ ಮಾಧ್ಯಮ ಪ್ರಕಟಣೆಗಳ ಪಟ್ಟಿಗೆ ಸೇರ್ಪಡೆಗೊಳಿಸುವ ಪ್ರಕ್ರಿಯೆಗೆ ಮಹತ್ವದ ಚಾಲನೆ ದೊರೆತಿದೆ. ಸಂಸ್ಥೆಯ ಸಂಸ್ಥಾಪಕರು ಮತ್ತು ಸಂಪಾದಕರಾದ ಶ್ರೀ ಶಿವಾನಂದ ಹಡಪದ ಅವರು ದಿನಾಂಕ:25-09-2026 ರಂದು ಸಲ್ಲಿಸಿದ್ದ ಅಧಿಕೃತ ಮನವಿಯನ್ನು ಪುರಸ್ಕರಿಸಿರುವ ಧಾರವಾಡ ಜಿಲ್ಲಾಧಿಕಾರಿಗಳ ಕಾರ್ಯಾಲಯವು, ಈ ಕುರಿತು ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದೆ. ಅಪರ ಜಿಲ್ಲಾಧಿಕಾರಿಗಳಾದ ಶ್ರೀಮತಿ ಸಿ. ಡಿ. ಗೀತಾ ಅವರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಧಾರವಾಡ ಜಿಲ್ಲಾ ಸಹಾಯಕ ನಿರ್ದೇಶಕರಿಗೆ ಅಧಿಕೃತ ಮಾಹಿತಿ ಪತ್ರ (ಸಂಖ್ಯೆ: ಜೆ.ಪಿ.ಎನ್/ಸಿಆರ್/2026-27/ಇ-557137) ರವಾನಿಸಿದ್ದಾರೆ. ಅರ್ಜಿದಾರರ ಅರ್ಜಿಯಲ್ಲಿನ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿ ನಿಯಮಾನುಸಾರ ಸೂಕ್ತ ಕ್ರಮಕೈಗೊಂಡು, ಪೂರಕ ದಾಖಲೆಗಳೊಂದಿಗೆ ಕೂಡಲೇ ಮಾಹಿತಿಯನ್ನು ಈ ಕಾರ್ಯಾಲಯಕ್ಕೆ ಸಲ್ಲಿಸಲು ಪತ್ರದಲ್ಲಿ ಸ್ಪಷ್ಟವಾಗಿ ಸೂಚಿಸಲಾಗಿದೆ. ಗ್ರಾಮೀಣ ಭಾಗದ ಜನಪರ ಸಮಸ್ಯೆಗಳು, ರೈತರ ಧ್ವನಿ, ಕಾರ್ಮಿಕರ ಹಿತಾಸಕ್ತಿ ಹಾಗೂ ಸರ್ಕಾರದ ವಿವಿಧ ಜನಕಲ್ಯಾಣ ಯೋಜನೆಗಳನ್ನು ಸಾರ್ವಜನಿಕರಿಗೆ ನಿಖರವಾಗಿ ತಲುಪಿಸುವ ಧ್ಯೇಯ ಹೊಂದಿರುವ 'ವೇದ ಕನ್ನಡ...