| 
⚡ ಮುಖ್ಯಾಂಶಗಳು
🔔 ವೇದ ಕನ್ನಡ ನ್ಯೂಸ್ ಪೋರ್ಟಲ್‌ಗೆ ಸ್ವಾಗತ! ತಾಜಾ ಸುದ್ದಿಗಳಿಗಾಗಿ ನಮ್ಮೊಂದಿಗೆ ಇರಿ.
Showing posts with the label ಕವನ

ಬರಡುತನದಿಂದ ಮರುಹುಟ್ಟಿಗೆ: ಶ್ರೀ ಚನ್ನಪ್ಪ ಅಂಗಡಿಯವರ "ಪುನರುತ್ಥಾನ"

Image
ಸಾಹಿತ್ಯ ವೇದಿಕೆ | ಪುನರುತ್ಥಾನ ಕಾವ್ಯವೆಂದರೆ ಕೇವಲ ಅಕ್ಷರಗಳಲ್ಲ, ಅದೊಂದು ಜೀವಂತ ಚೈತನ್ಯ. ಕವಿಯ ಒಳಗಿನ ತೊಳಲಾಟ, ಕತ್ತಲೆಯನ್ನು ಸೀಳಿ ಬರುವ ಹೊಸ ಭರವಸೆಯ ನಾದ—'ಪುನರುತ್ಥಾನ'. ಪುನರುತ್ಥಾನ ಈ ಕವಿತೆಯಲ್ಲಿ ಹೊಸದೇನಿದೆ? ಅದೇ ಲಯ, ಅದೇ ಪ್ರಾಸ ಅಲಂಕಾರ ಛಂದಸ್ಸು ರೂಪಕ ಪ್ರತಿಮೆ ಅಹಂಕಾರ ಒಲ್ಲದ ಒಲುಮೆ ಎಂದಂದುಕೊಂಡು ಬದಿಗೆ ಸರಿಸುವಷ್ಟರಲ್ಲಿ ! …. ತಿರುಗಿ ನಿಲ್ಲುತ್ತದೆ ವಿಶ್ವರೂಪ ತೋರುತ್ತ ಯಾರದೋ ನೋವಾಗುತ್ತೆ ಯಾರದೋ ನಲಿವಿಗೆ ಕಾರಣವಾಗುತ್ತೆ. ಯಾರದೋ ದನಿ, ದನಿಯ ಬನಿ, ಬನಿಯ ಹನಿ, ನಿ..ನಿ..ನೀ ನೋವಾಗುತ್ತೆ ಅಂತ ಈಗೊಮ್ಮೆ ಹೇಳಿದೆ ಅದು ಅಷ್ಟು ಸುಲಭಕ್ಕೆ ಹೇಳಿ ಮುಗಿಸುವಂತದ್ದಲ್ಲ ನೋವಾಗುತ್ತೆ, ಕಾವಾಗುತ್ತೆ ಕಾವಿಗೆ ಕರಗುವ ಮಂಜಾಗುತ್ತೆ ಮಂಜಿಗೆ ನಡುಗುವ ಕಳೇಬರವಾಗುತ್ತೆ.. ಅಷ್ಟು ಸಾಕಲ್ಲ ಕವಿತೆಗೆ? ನನಗೆ ನಾನೇ ಹೇಳಿಕೊಂಡು ಏಳುವಷ್ಟರಲ್ಲಿ ಕೈ ಹಿಡಿಯುತ್ತದೆ ಕರೆದು ಕೂರಿಸುತ್ತದೆ. ಬೆನ್ನು ಸವರುತ್ತ ಇನ್ನು ಮುಂದಿದೆಯೆನ್ನುತ್ತ ಇನ್ನೂ ಹಾಡುವುದುಳಿದಿದೆ ಕಡುಕತ್ತಲಿನೊಳಗೆ ತಡಕಾಡುತಿದೆಯಾ ಹಾಡು ನೋಡು ಒಳಗಿದೆ ಹೊಸದು ಜೀವ ಜೀವಗಳ ಬೆಸೆದು ಜೀವ ಭಾವಗಳ ಹೊಸೆದು ಹೊಸೆದು ಕದ ತಳ್ಳಿಕೊಂಡು ಬಂದಿತು ಕವಿತೆ ಮತ್ತೆ ಜಿಗಿದು! — ಕವಿ / ರಚನೆ: ಶ್ರೀ ಚನ್ನಪ್ಪ ಅಂಗಡಿ