| 
⚡ ಮುಖ್ಯಾಂಶಗಳು
🔔 ವೇದ ಕನ್ನಡ ನ್ಯೂಸ್ ಪೋರ್ಟಲ್‌ಗೆ ಸ್ವಾಗತ! ತಾಜಾ ಸುದ್ದಿಗಳಿಗಾಗಿ ನಮ್ಮೊಂದಿಗೆ ಇರಿ.
Showing posts with the label ಕನ್ನಡ ಕವಿತೆ

ಬರಡುತನದಿಂದ ಮರುಹುಟ್ಟಿಗೆ: ಶ್ರೀ ಚನ್ನಪ್ಪ ಅಂಗಡಿಯವರ "ಪುನರುತ್ಥಾನ"

Image
ಸಾಹಿತ್ಯ ವೇದಿಕೆ | ಪುನರುತ್ಥಾನ ಕಾವ್ಯವೆಂದರೆ ಕೇವಲ ಅಕ್ಷರಗಳಲ್ಲ, ಅದೊಂದು ಜೀವಂತ ಚೈತನ್ಯ. ಕವಿಯ ಒಳಗಿನ ತೊಳಲಾಟ, ಕತ್ತಲೆಯನ್ನು ಸೀಳಿ ಬರುವ ಹೊಸ ಭರವಸೆಯ ನಾದ—'ಪುನರುತ್ಥಾನ'. ಪುನರುತ್ಥಾನ ಈ ಕವಿತೆಯಲ್ಲಿ ಹೊಸದೇನಿದೆ? ಅದೇ ಲಯ, ಅದೇ ಪ್ರಾಸ ಅಲಂಕಾರ ಛಂದಸ್ಸು ರೂಪಕ ಪ್ರತಿಮೆ ಅಹಂಕಾರ ಒಲ್ಲದ ಒಲುಮೆ ಎಂದಂದುಕೊಂಡು ಬದಿಗೆ ಸರಿಸುವಷ್ಟರಲ್ಲಿ ! …. ತಿರುಗಿ ನಿಲ್ಲುತ್ತದೆ ವಿಶ್ವರೂಪ ತೋರುತ್ತ ಯಾರದೋ ನೋವಾಗುತ್ತೆ ಯಾರದೋ ನಲಿವಿಗೆ ಕಾರಣವಾಗುತ್ತೆ. ಯಾರದೋ ದನಿ, ದನಿಯ ಬನಿ, ಬನಿಯ ಹನಿ, ನಿ..ನಿ..ನೀ ನೋವಾಗುತ್ತೆ ಅಂತ ಈಗೊಮ್ಮೆ ಹೇಳಿದೆ ಅದು ಅಷ್ಟು ಸುಲಭಕ್ಕೆ ಹೇಳಿ ಮುಗಿಸುವಂತದ್ದಲ್ಲ ನೋವಾಗುತ್ತೆ, ಕಾವಾಗುತ್ತೆ ಕಾವಿಗೆ ಕರಗುವ ಮಂಜಾಗುತ್ತೆ ಮಂಜಿಗೆ ನಡುಗುವ ಕಳೇಬರವಾಗುತ್ತೆ.. ಅಷ್ಟು ಸಾಕಲ್ಲ ಕವಿತೆಗೆ? ನನಗೆ ನಾನೇ ಹೇಳಿಕೊಂಡು ಏಳುವಷ್ಟರಲ್ಲಿ ಕೈ ಹಿಡಿಯುತ್ತದೆ ಕರೆದು ಕೂರಿಸುತ್ತದೆ. ಬೆನ್ನು ಸವರುತ್ತ ಇನ್ನು ಮುಂದಿದೆಯೆನ್ನುತ್ತ ಇನ್ನೂ ಹಾಡುವುದುಳಿದಿದೆ ಕಡುಕತ್ತಲಿನೊಳಗೆ ತಡಕಾಡುತಿದೆಯಾ ಹಾಡು ನೋಡು ಒಳಗಿದೆ ಹೊಸದು ಜೀವ ಜೀವಗಳ ಬೆಸೆದು ಜೀವ ಭಾವಗಳ ಹೊಸೆದು ಹೊಸೆದು ಕದ ತಳ್ಳಿಕೊಂಡು ಬಂದಿತು ಕವಿತೆ ಮತ್ತೆ ಜಿಗಿದು! — ಕವಿ / ರಚನೆ: ಶ್ರೀ ಚನ್ನಪ್ಪ ಅಂಗಡಿ

ಕವಿ ಚನ್ನಪ್ಪ ಅಂಗಡಿ ಅವರ 'ತೊಳೆದ ಕತ್ತಲು': ಬದುಕಿನ ಸಂಕಷ್ಟ ಕಳೆದು ಸಹಬಾಳ್ವೆ ಸಾರುವ ಸುಂದರ ಭಾವಗೀತೆ.

Image
ಕವಿತೆಯ ಮುಖ್ಯಾಂಶ ಹಾಗೂ ಭಾವಾರ್ಥ: ಚನ್ನಪ್ಪ ಅಂಗಡಿ ಅವರ 'ತೊಳೆದ ಕತ್ತಲು' ಕವಿತೆಯು ಗ್ರಾಮೀಣ ಬದುಕಿನ ನೋವು, ಸಂಕಷ್ಟ, ಜನರ ಮನದಾಳದ ಕತ್ತಲೆ ಹಾಗೂ ಕಾಲಕ್ರಮೇಣ ಎಲ್ಲ ಕಷ್ಟಗಳೂ ಕಳೆದು ಸಮಾಜದಲ್ಲಿ ಸಹಬಾಳ್ವೆ ಮೂಡುವ ಆಶಯವನ್ನು ಗಹನವಾಗಿ ಬಿಂಬಿಸುತ್ತದೆ. ಊರು-ಕೇರಿಗಳ ಕಷ್ಟಗಳು, ಅಂತೆ-ಕಂತೆಗಳ ಮಾತುಗಳು ಮತ್ತು ಬದುಕಿನ ಏರಿಳಿತಗಳನ್ನು ಮೆಟ್ಟಿನಿಂತು ಕಾಲ ಕಳೆಯುವ ವಾಸ್ತವವನ್ನು ಕವಿತೆಯ ಆರಂಭದಲ್ಲಿ ಕಟ್ಟಿಕೊಡಲಾಗಿದೆ. ಬಿಸಿಲು, ದಣಿವು ಮತ್ತು ಬದುಕಿನ ಹಾದಿಯಲ್ಲಿ ಎದುರಾಗುವ ಸಂಕಟಗಳನ್ನು ಕತ್ತಲಿಗೆ ಹೋಲಿಸಲಾಗಿದೆ. ಕೊನೆಯಲ್ಲಿ, ಭೂಮಿಯು ಮಳೆಗಾಗಿ ಕಾಯುವಂತೆ ಬದುಕು ಭರವಸೆಯಿಂದ ಕಾಯುತ್ತಿದ್ದು, ಸಮಸ್ತ ಊರು-ಮನೆಗಳಲ್ಲಿ ದ್ವೇಷ ಕಳೆದು, ಪರಸ್ಪರ ಕೈಜೋಡಿಸಿ ಪ್ರೀತಿ-ಸಹಬಾಳ್ವೆಯ ಬೆಳೆ ಬೆಳೆಯಬೇಕು ಎಂಬ ಉದಾತ್ತ ಸಂದೇಶದೊಂದಿಗೆ ಕವಿತೆ ಮುಕ್ತಾಯವಾಗುತ್ತದೆ. ಕವಿತೆಯ ಸಾಲುಗಳು: ಆ ಊರು-ಕೇರಿ ಮನೆ-ಅಂಗಳ ಎಲ್ಲೆಡೆಯೆಂತೆ ಸಿವುಡು ಕಟ್ಟಿ ಹೊರಬೇಕಾಗಿಲ್ಲ ಯಾರೂ ಅಂತೆಕಂತೆ ಹಿತ್ತಲಬಾಗಿಲು ‘ತಲೆಬಾಗ’ಲು ನಮ್ಮ ನಿಮ್ಮಂತೆ ಬಿರುಕಿನೊಳಗೆ ಮಾಸಿದ ಕತ್ತಲು ಕಾಲ ಕಳೆದಂತೆ ಊರನಡುವಿನ ರಸ್ತೆಯಲ್ಲಿ ನಡೆದು ಗೋಗುವಲ್ಲಿ ಬಿರುಬಿಸಿಲಿನಲ್ಲಿ ಕಾಯುತ ಕಣ್ಣಕವಿದ ಕತ್ತಲಲ್ಲಿ ಹೋಗುವಾಗ ಬರೂವಾಗ ತೆರೆದುನಿಂತ ಬಾಗಿಲಲ್ಲಿ ಅಲುಗಾಡದ ಚಿತ್ತಾರ ಇಳಿಬಿದ್ದ ಪರದೆಯಲ್ಲಿ ಆ ಬದಿ ಈ ಬದಿ ಹೆಗಲುಗೊಟ್ಟ ಹಾಸುಗಲ್ಲು ಅಂಚಗುಂಟ ಅರಳಿನ...