ಧಾರವಾಡ: ಡಿಸಿ, ಜಿ.ಪಂ ಸಿಇಒ ಆದೇಶಕ್ಕೂ ಕಿಮ್ಮತ್ತಿಲ್ಲ; ೧೪ ತಿಂಗಳು ಕಳೆದರೂ ಅಂಬ್ಲಿಕೊಪ್ಪದ ಬಡ ಕುಟುಂಬಗಳಿಗೆ ಸಿಗದ ವಿದ್ಯುತ್ ಮೀಟರ್!
ಸುದ್ದಿ ವರದಿ: ಧಾರವಾಡ (ಅಂಬ್ಲಿಕೊಪ್ಪ): ಗ್ರಾಮೀಣ ಭಾಗದಲ್ಲಿ ಅರ್ಜಿ ಸಲ್ಲಿಸಿದ ೧೫ ದಿನಗಳೊಳಗೆ ಹೊಸ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂಬ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ (KERC) ಕಟ್ಟುನಿಟ್ಟಿನ ಆದೇಶವಿದ್ದರೂ, ಧಾರವಾಡ ಗ್ರಾಮೀಣ ಉಪವಿಭಾಗ-೨ ರ ಹೆಸ್ಕಾಂ ಅಧಿಕಾರಿಗಳ ವಿಳಂಬ ಧೋರಣೆಯಿಂದಾಗಿ ಅಂಬ್ಲಿಕೊಪ್ಪ ಗ್ರಾಮದ ೬ ಸ್ಥಳೀಯ ನಿವಾಸಿ ಕುಟುಂಬಗಳು ಬರೋಬ್ಬರಿ ೧೪ ತಿಂಗಳು ಕಳೆದರೂ ವಿದ್ಯುತ್ ಮೀಟರ್ ಇಲ್ಲದೆ ಕತ್ತಲಲ್ಲಿ ಜೀವನ ಸಾಗಿಸುವಂತಾಗಿದೆ. ಏನಿದು ಪ್ರಕರಣ? ಧಾರವಾಡ ತಾಲ್ಲೂಕಿನ ಹಳ್ಳಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಬ್ಲಿಕೊಪ್ಪ ಗ್ರಾಮದಲ್ಲಿ ೬ ಬಡ ಕುಟುಂಬಗಳು ಕಾನೂನುಬದ್ಧ ಶಾಶ್ವತ ಗುತ್ತಿಗೆ ಪತ್ರಗಳ ಆಧಾರದ ಮೇಲೆ ಮನೆ ನಿರ್ಮಿಸಿಕೊಂಡು ವಾಸಿಸುತ್ತಿವೆ. ಹೊಸ ವಿದ್ಯುತ್ ಸಂಪರ್ಕಕ್ಕಾಗಿ ದಿನಾಂಕ:15-09-2025 ರಂದೇ ಹೆಸ್ಕಾಂ ಕಚೇರಿಗೆ ಅಧಿಕೃತವಾಗಿ ಅರ್ಜಿ ಸಲ್ಲಿಸಲಾಗಿತ್ತು. ಆದರೆ, ಸ್ಥಳೀಯ ಶಾಖಾಧಿಕಾರಿಗಳು ಮತ್ತು ಉಪವಿಭಾಗದ ಅಧಿಕಾರಿಗಳು ಬರೋಬ್ಬರಿ ಒಂದು ವರ್ಷಕ್ಕೂ ಹೆಚ್ಚು ಕಾಲ ಕಡತವನ್ನು ಬಾಕಿ ಇಟ್ಟುಕೊಂಡು, "ಇ-ಸ್ವತ್ತು ತನ್ನಿ, ಹೊಸ ಕಂಬ ಹಾಕಬೇಕು, ₹೬೦ ರಿಂದ ₹೭೦ ಸಾವಿರ ಖರ್ಚಾಗುತ್ತದೆ" ಎಂಬ ಸಬೂಬುಗಳನ್ನು ಹೇಳುತ್ತಾ ಬಡ ಕುಟುಂಬಗಳನ್ನು ಅಲೆದಾಡಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಜಿಲ್ಲಾಧಿಕಾರಿಗಳು ಹಾಗೂ ಜಿ.ಪಂ ಸಿಇಒ ಆದೇಶಕ್ಕೂ ಡೋಂಟ್ ಕೇರ್! ಹೆಸ್ಕಾ...