ಯುವಜನತೆಗೆ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಅರಿವು ಅತ್ಯಗತ್ಯ: ಕವಿವಿಯಲ್ಲಿ ಪ್ರೊ. ವೇದಮೂರ್ತಿ ಕರೆ | ವಿಕಸಿತ ಭಾರತ ಯುವ ಸಂಸತ್ತು-2027 ಕಾರ್ಯಕ್ರಮ.
ಸುದ್ದಿ ವಿವರ :
ಧಾರವಾಡ (ವೇದ ಕನ್ನಡ ನ್ಯೂಸ್)
ದೇಶದ ಸಂವಿಧಾನ, ಸಂಸದೀಯ ಕಾರ್ಯವೈಖರಿ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯ ಕುರಿತು ಇಂದಿನ ಯುವಜನತೆ ಸಮಗ್ರವಾಗಿ ತಿಳಿದುಕೊಳ್ಳುವುದು ಅತ್ಯಂತ ಅಗತ್ಯವಾಗಿದೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಪ್ರಕಟಣಾ ವಿಭಾಗದ ನಿರ್ದೇಶಕರಾದ ಪ್ರೊ. ವೇದಮೂರ್ತಿ ಅಭಿಪ್ರಾಯಪಟ್ಟರು. ಕರ್ನಾಟಕ ವಿಶ್ವವಿದ್ಯಾಲಯದ ಸೆನೆಟ್ ಸಭಾಭವನದಲ್ಲಿ ಭಾರತ ಸರ್ಕಾರದ ಮೈ ಭಾರತ ಕೇಂದ್ರ (ಧಾರವಾಡ) ಹಾಗೂ ಕವಿವಿ ಎನ್ಎಸ್ಎಸ್ (NSS) ಕೋಶದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ‘ವಿಕಸಿತ ಭಾರತ ಯುವ ಸಂಸತ್ತು - 2027’ (Viksit Bharat Young Leaders Dialogue / Youth Parliament) ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಯುವ ಸಂಸತ್ತಿನ ಮೂಲ ಆಶಯ ವಿದ್ಯಾರ್ಥಿಗಳಲ್ಲಿ ಸಾರ್ವಜನಿಕ ಚರ್ಚೆ, ಸಂವಾದ, ತಾರ್ಕಿಕ ಚಿಂತನೆ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ನಾಯಕತ್ವ ಗುಣಗಳನ್ನು ಮೈಗೂಡಿಸುವುದಾಗಿದೆ ಎಂದ ಅವರು, ಇಂತಹ ರಚನಾತ್ಮಕ ವೇದಿಕೆಗಳು ಸಂಸದೀಯ ಪ್ರಕ್ರಿಯೆ ಹಾಗೂ ಜ್ವಲಂತ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಲು ಸಹಕಾರಿಯಾಗುತ್ತವೆ. ಯುವಜನರು ಜವಾಬ್ದಾರಿಯುತವಾಗಿ ತಮ್ಮ ಅಭಿಪ್ರಾಯ ಮಂಡಿಸುವುದರೊಂದಿಗೆ ಸಮಾಜಮುಖಿ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಹೈಕೋರ್ಟ್ ವಕೀಲರಾದ ಶರಣು ಅಂಗಡಿ ಮಾತನಾಡಿ, ಯುವಜನರು ದೇಶದ ಭವಿಷ್ಯವನ್ನು ರೂಪಿಸುವ ಅಪ್ರತಿಮ ಶಕ್ತಿ. ವಿದ್ಯಾರ್ಥಿ ದೆಸೆಯಲ್ಲಿಯೇ ಶಿಸ್ತು, ಸಾಮಾಜಿಕ ಬದ್ಧತೆ, ಸಂವಿಧಾನಿಕ ಮೌಲ್ಯಗಳು ಹಾಗೂ ರಾಷ್ಟ್ರೀಯ ಏಕತೆಯ ಮನೋಭಾವವನ್ನು ರೂಢಿಸಿಕೊಳ್ಳಬೇಕು. ಜ್ಞಾನ ಮತ್ತು ಕೌಶಲ್ಯಗಳ ಮೂಲಕ ಪ್ರತಿಯೊಬ್ಬರೂ ವಿಕಸಿತ ಭಾರತದ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದರು.
ಧಾರವಾಡ ಮೈ ಭಾರತ ಕೇಂದ್ರದ ಜಿಲ್ಲಾ ಯುವಜನ ಅಧಿಕಾರಿಗಳಾದ ಸಂಗ್ರಾಮ ವಿ. ಸಾವಂತ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲಾ ಮಟ್ಟದ ಈ ಯುವ ಸಂಸತ್ತಿನಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿ ಆಯ್ಕೆಯಾಗುವ ಸ್ಪರ್ಧಿಗಳು ಮುಂದಿನ ಹಂತದಲ್ಲಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಯುವ ಸಂಸತ್ತಿನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಕವಿವಿ ಎನ್ಎಸ್ಎಸ್ ಕೋಶದ ಕಾರ್ಯಕ್ರಮ ಸಂಯೋಜಕರಾದ ಪ್ರೊ. ಎಂ. ಬಿ. ದಳಪತಿ ಮಾತನಾಡಿ, ಯುವಜನರ ಸೃಜನಶೀಲತೆ, ಆಲೋಚನೆ ಹಾಗೂ ಕ್ರಿಯಾಶೀಲತೆಯನ್ನು ದೇಶದ ಸಬಲೀಕರಣ ಹಾಗೂ ಅಭಿವೃದ್ಧಿಗೆ ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಬೇಕು ಎಂದು ಆಶಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಯುವ ಐಕಾನ್ ಕೌಶಿಕ್ ಪಂಡಿತ್, ಮೈ ಭಾರತ ಇಲಾಖೆಯ ಶಿವಾಜಿ ಎನ್. ಕಡ್ಡೆಪ್ಪನವರ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಂತೋಷ ಭದ್ರಾಪೂರ ಅಚ್ಚುಕಟ್ಟಾಗಿ ನಿರೂಪಿಸಿದರೆ, ಬಸವರಾಜ ಗುಡ್ಡಪ್ಪನವರ ವಂದಿಸಿದರು.