| 
⚡ ಮುಖ್ಯಾಂಶಗಳು
🔔 ವೇದ ಕನ್ನಡ ನ್ಯೂಸ್ ಪೋರ್ಟಲ್‌ಗೆ ಸ್ವಾಗತ! ತಾಜಾ ಸುದ್ದಿಗಳಿಗಾಗಿ ನಮ್ಮೊಂದಿಗೆ ಇರಿ.
Showing posts with the label ವಿಶೇಷ ವರದಿ

ನಾವಳ್ಳಿ ಅಂಜುಮನ್-ಎ-ಇಸ್ಲಾಂ ಆಡಳಿತ ಸಮಿತಿ ಪ್ರಕರಣ: 2022 ರಲ್ಲಿ ಸಲ್ಲಿಕೆಯಾದ ಪ್ರಸ್ತಾವನೆಗೆ 4 ವರ್ಷ ಕಳೆದರೂ (2026) ಸಿಗದ ವಕ್ಫ್ ಮಂಡಳಿ ಅನುಮೋದನೆ!

Image
ಧಾರವಾಡ: ನವಲಗುಂದ ವಿಧಾನಸಭಾ ಕ್ಷೇತ್ರದ ನಾವಳ್ಳಿ ಗ್ರಾಮದ ಅಂಜುಮನ್-ಎ-ಇಸ್ಲಾಂ ವಕ್ಫ್ ಸಂಸ್ಥೆಯ ಆಡಳಿತ ಸಮಿತಿ ಅನುಮೋದನೆಗೆ ಸಂಬಂಧಿಸಿದ ಪ್ರಸ್ತಾವನೆಗಳು ಹಲವು ವರ್ಷಗಳಿಂದ ಸಲ್ಲಿಕೆಯಾಗುತ್ತಿರುವುದು ದಾಖಲೆಗಳಿಂದ ತಿಳಿದುಬಂದಿದೆ. ಧಾರವಾಡ ಜಿಲ್ಲಾ ವಕ್ಫ್ ಅಧಿಕಾರಿಗಳು ದಿನಾಂಕ: 29.06.2022 ರಂದು ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳಿಗೆ ಪತ್ರ ಬರೆದು ಅನುಮೋದನೆಗೆ ಪ್ರಸ್ತಾವನೆ ಸಲ್ಲಿಸಿದ್ದರು. ಅದಕ್ಕೂ ಮುನ್ನ ದಿನಾಂಕ: 08.06.2022 ರಂದು ಸಾರ್ವಜನಿಕ ನೋಟಿಸ್ ಹೊರಡಿಸಿ, ದಿನಾಂಕ:10.06.2022 ರಂದು ಮಹಜರ್ ಮಾಡಲಾಗಿತ್ತು. ಆಗ ಯಾವುದೇ ಆಕ್ಷೇಪಣೆ ಬಂದಿರಲಿಲ್ಲ ಎಂದು ಪತ್ರದಲ್ಲಿ ತಿಳಿಸಲಾಗಿದೆ. ನವಲಗುಂದ ಶಾಸಕರಾದ ಸನ್ಮಾನ್ಯ ಶ್ರೀ ಎನ್.ಎಚ್. ಕೋನರಡ್ಡಿ ಅವರು ದಿನಾಂಕ: 10.01.2026 ರಂದು ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷರಿಗೆ ಪತ್ರ ಬರೆದು, ಈ ಸಂಸ್ಥೆ ಸೇರಿದಂತೆ ಕ್ಷೇತ್ರದ ಮೂರು ಮಸೀದಿಗಳ ಆಡಳಿತ ಸಮಿತಿ/ಬೈಲಾ ಮಂಜೂರು ಮಾಡುವಂತೆ ಕೋರಿದ್ದರು. ಆ ಪತ್ರದಲ್ಲಿ 2022 ರ ಜಿಲ್ಲಾ ವಕ್ಫ್ ಕಚೇರಿ ಪತ್ರವನ್ನೂ ಉಲ್ಲೇಖಿಸಲಾಗಿದೆ. ತದನಂತರ ಜೂನ್ 2026 ರಲ್ಲಿ ಜಿಲ್ಲಾ ವಕ್ಫ್ ಕಚೇರಿ ಸಾರ್ವಜನಿಕ ನೋಟಿಸ್ ಪ್ರಕಟಿಸಿ 15 ದಿನಗಳ ಕಾಲಾವಕಾಶ ನೀಡಿತ್ತು. ಈ ಬಾರಿಯೂ ಯಾವುದೇ ಆಕ್ಷೇಪಣೆ ಅಥವಾ ಸಲಹೆ ಸ್ವೀಕೃತವಾಗಿಲ್ಲ ಎಂದು ತಿಳಿಸಿ, ದಿನಾಂಕ:24.06.2026 ರಂದು ಪ್ರಸ್ತಾವನೆಯನ್ನು ಮತ್ತೊಮ್ಮೆ ಮಂಡಳ...