| 
⚡ ಮುಖ್ಯಾಂಶಗಳು
🔔 ವೇದ ಕನ್ನಡ ನ್ಯೂಸ್ ಪೋರ್ಟಲ್‌ಗೆ ಸ್ವಾಗತ! ತಾಜಾ ಸುದ್ದಿಗಳಿಗಾಗಿ ನಮ್ಮೊಂದಿಗೆ ಇರಿ.
Showing posts with the label ಧಾರವಾಡ ಸುದ್ದಿ

ಧಾರವಾಡ: ಡಿಸಿ, ಜಿ.ಪಂ ಸಿಇಒ ಆದೇಶಕ್ಕೂ ಕಿಮ್ಮತ್ತಿಲ್ಲ; ೧೪ ತಿಂಗಳು ಕಳೆದರೂ ಅಂಬ್ಲಿಕೊಪ್ಪದ ಬಡ ಕುಟುಂಬಗಳಿಗೆ ಸಿಗದ ವಿದ್ಯುತ್ ಮೀಟರ್!

Image
ಸುದ್ದಿ ವರದಿ: ಧಾರವಾಡ (ಅಂಬ್ಲಿಕೊಪ್ಪ): ಗ್ರಾಮೀಣ ಭಾಗದಲ್ಲಿ ಅರ್ಜಿ ಸಲ್ಲಿಸಿದ ೧೫ ದಿನಗಳೊಳಗೆ ಹೊಸ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂಬ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ (KERC) ಕಟ್ಟುನಿಟ್ಟಿನ ಆದೇಶವಿದ್ದರೂ, ಧಾರವಾಡ ಗ್ರಾಮೀಣ ಉಪವಿಭಾಗ-೨ ರ ಹೆಸ್ಕಾಂ ಅಧಿಕಾರಿಗಳ ವಿಳಂಬ ಧೋರಣೆಯಿಂದಾಗಿ ಅಂಬ್ಲಿಕೊಪ್ಪ ಗ್ರಾಮದ ೬ ಸ್ಥಳೀಯ ನಿವಾಸಿ ಕುಟುಂಬಗಳು ಬರೋಬ್ಬರಿ ೧೪ ತಿಂಗಳು ಕಳೆದರೂ ವಿದ್ಯುತ್ ಮೀಟರ್ ಇಲ್ಲದೆ ಕತ್ತಲಲ್ಲಿ ಜೀವನ ಸಾಗಿಸುವಂತಾಗಿದೆ. ಏನಿದು ಪ್ರಕರಣ? ಧಾರವಾಡ ತಾಲ್ಲೂಕಿನ ಹಳ್ಳಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಬ್ಲಿಕೊಪ್ಪ ಗ್ರಾಮದಲ್ಲಿ ೬ ಬಡ ಕುಟುಂಬಗಳು ಕಾನೂನುಬದ್ಧ ಶಾಶ್ವತ ಗುತ್ತಿಗೆ ಪತ್ರಗಳ ಆಧಾರದ ಮೇಲೆ ಮನೆ ನಿರ್ಮಿಸಿಕೊಂಡು ವಾಸಿಸುತ್ತಿವೆ. ಹೊಸ ವಿದ್ಯುತ್ ಸಂಪರ್ಕಕ್ಕಾಗಿ ದಿನಾಂಕ:15-09-2025 ರಂದೇ ಹೆಸ್ಕಾಂ ಕಚೇರಿಗೆ ಅಧಿಕೃತವಾಗಿ ಅರ್ಜಿ ಸಲ್ಲಿಸಲಾಗಿತ್ತು. ಆದರೆ, ಸ್ಥಳೀಯ ಶಾಖಾಧಿಕಾರಿಗಳು ಮತ್ತು ಉಪವಿಭಾಗದ ಅಧಿಕಾರಿಗಳು ಬರೋಬ್ಬರಿ ಒಂದು ವರ್ಷಕ್ಕೂ ಹೆಚ್ಚು ಕಾಲ ಕಡತವನ್ನು ಬಾಕಿ ಇಟ್ಟುಕೊಂಡು, "ಇ-ಸ್ವತ್ತು ತನ್ನಿ, ಹೊಸ ಕಂಬ ಹಾಕಬೇಕು, ₹೬೦ ರಿಂದ ₹೭೦ ಸಾವಿರ ಖರ್ಚಾಗುತ್ತದೆ" ಎಂಬ ಸಬೂಬುಗಳನ್ನು ಹೇಳುತ್ತಾ ಬಡ ಕುಟುಂಬಗಳನ್ನು ಅಲೆದಾಡಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಜಿಲ್ಲಾಧಿಕಾರಿಗಳು ಹಾಗೂ ಜಿ.ಪಂ ಸಿಇಒ ಆದೇಶಕ್ಕೂ ಡೋಂಟ್ ಕೇರ್! ಹೆಸ್ಕಾ...

ಅಂಬ್ಲಿಕೊಪ್ಪ ಗ್ರಾಮದ ಶ್ರೀಮತಿ ಅಕ್ಕಮಹಾದೇವಿ ಹಡಪದ ಹಾಗೂ ಶ್ರೀಮತಿ ಶಿವಲೀಲಾ ಸಂತೋಷ ಮನಸೂರು ಎಲ್‌ಐಸಿ 'ಭೀಮಾ ಸಖಿ' ಏಜೆಂಟರಾಗಿ ನೇಮಕ.

ಅಂಬ್ಲಿಕೊಪ್ಪ (ಧಾರವಾಡ): ಧಾರವಾಡ ತಾಲೂಕಿನ ಅಂಬ್ಲಿಕೊಪ್ಪ ಗ್ರಾಮದ ಪ್ರತಿಷ್ಠಿತ ನಿವಾಸಿಗಳಾದ ಶ್ರೀಮತಿ ಅಕ್ಕಮಹಾದೇವಿ ಶಿ. ಹಡಪದ ಹಾಗೂ ಶ್ರೀಮತಿ ಶಿವಲೀಲಾ ಮನಸೂರು ಅವರು ಭಾರತೀಯ ಜೀವ ವಿಮಾ ನಿಗಮದ (LIC) ಅಧಿಕೃತ ‘ಭೀಮಾ ಸಖಿ’ (LIC Agents) ಏಜೆಂಟರುಗಳಾಗಿ ನೇಮಕಗೊಂಡು ಸಾರ್ವಜನಿಕ ಸೇವೆಗೆ ಮುಂದಾಗಿದ್ದಾರೆ. ಗ್ರಾಮೀಣ ಭಾಗದ ಜನರಲ್ಲಿ ಜೀವ ವಿಮೆಯ ಮಹತ್ವ, ಆರ್ಥಿಕ ಭದ್ರತೆ ಹಾಗೂ ಭವಿಷ್ಯದ ಉಳಿತಾಯ ಯೋಜನೆಗಳ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇವರು ಕಾರ್ಯನಿರ್ವಹಿಸಲಿದ್ದಾರೆ. ಎಲ್‌ಐಸಿಯ ವಿವಿಧ ಉಳಿತಾಯ ಮತ್ತು ಜೀವ ವಿಮಾ ಪಾಲಿಸಿಗಳು, ಮಕ್ಕಳ ಶಿಕ್ಷಣ, ಹೆಣ್ಣುಮಕ್ಕಳ ಮದುವೆ ಹಾಗೂ ವೃದ್ಧಾಪ್ಯದ ಪಿಂಚಣಿ ಯೋಜನೆಗಳ ಕುರಿತು ಗ್ರಾಮೀಣ ಜನರಿಗೆ ಮನೆಬಾಗಿಲಲ್ಲೇ ಸಮಗ್ರ ಮಾಹಿತಿ ಮತ್ತು ಸೇವೆ ಒದಗಿಸಲು ಇವರು ಲಭ್ಯವಿರುತ್ತಾರೆ. ಗ್ರಾಮದ ಮಹಿಳೆಯರು ಆರ್ಥಿಕ ಸ್ವಾವಲಂಬನೆ ಸಾಧಿಸಿ, ಸಾರ್ವಜನಿಕರಿಗೆ ವಿಮಾ ಸೇವೆ ನೀಡಲು ಮುಂದಾಗಿರುವುದಕ್ಕೆ ಗ್ರಾಮಸ್ಥರು ಹಾಗೂ ಹಿತೈಷಿಗಳು ಹರ್ಷ ವ್ಯಕ್ತಪಡಿಸಿ, ಶುಭ ಹಾರೈಸಿದ್ದಾರೆ.ೊಸ ಎಲ್‌ಐಸಿ ಪಾಲಿಸಿ ಮಾಡಿಸಲು ಹಾಗೂ ಪಾಲಿಸಿ ಸಂಬಂಧಿತ ಸೇವೆಗಳಿಗಾಗಿ ಅಂಬ್ಲಿಕೊಪ್ಪ ಗ್ರಾಮದ ಶ್ರೀಮತಿ ಅಕ್ಕಮಹಾದೇವಿ ಹಡಪದ ಮತ್ತು ಶ್ರೀಮತಿ ಶಿವಲೀಲಾ ಮನಸೂರು ಅವರನ್ನು ಸ್ಥಳೀಯವಾಗಿ ಸಂಪರ್ಕಿಸಬಹುದಾಗಿದೆ.

ಪಶ್ಚಿಮ ಪದವೀಧರ ಕ್ಷೇತ್ರ ಚುನಾವಣೆ ಮತ ಎಣಿಕೆ: ಧಾರವಾಡ ಜಿಲ್ಲೆಯಲ್ಲಿ ಅ.26 ರಿಂದ 27 ರವರೆಗೆ ಮದ್ಯ ಮಾರಾಟ ನಿಷೇಧಿಸಿ ಡಿಸಿ ಸ್ನೇಹಲ್ ಆರ್. ಆದೇಶ.

ಸುದ್ದಿ ವಿವರ: ಧಾರವಾಡ: ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರ ಕ್ಷೇತ್ರದ ದ್ವೈವಾರ್ಷಿಕ ಚುನಾವಣೆಯ ಮತ ಎಣಿಕೆಯ ಹಿನ್ನೆಲೆಯಲ್ಲಿ, ಧಾರವಾಡ ಜಿಲ್ಲೆಯಾದ್ಯಂತ ಅಕ್ಟೋಬರ್ 26 ರ ಸಂಜೆ 4 ಗಂಟೆಯಿಂದ ಅಕ್ಟೋಬರ್ 27 ರ ರಾತ್ರಿ 12 ಗಂಟೆಯವರೆಗೆ ಮದ್ಯ ಮಾರಾಟ, ಮದ್ಯಪಾನ ಹಾಗೂ ಮದ್ಯ ಸಾಗಾಣಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಸ್ನೇಹಲ್ ಆರ್. ಅವರು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಅಕ್ಟೋಬರ್ 27 ರಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕಟ್ಟಡದಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ. ಪ್ರಜಾ ಪ್ರಾತಿನಿಧ್ಯ ಕಾಯ್ದೆ 1951 ರ ಕಲಂ 135 (ಸಿ) ಹಾಗೂ ಚುನಾವಣಾ ಆಯೋಗದ ನಿರ್ದೇಶನದಂತೆ ಮತ ಎಣಿಕೆ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಹಾಗೂ ಶಾಂತಿ-ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಬಾರ್, ಕ್ಲಬ್, ಡಿಪೋಗಳು ಕಡ್ಡಾಯ ಬಂದ್: ಆದೇಶದ ಅನ್ವಯ ಧಾರವಾಡ ಜಿಲ್ಲಾ ವ್ಯಾಪ್ತಿಯಲ್ಲಿರುವ ಎಲ್ಲಾ ಭಾರತೀಯ ತಯಾರಿಕಾ ಮದ್ಯದ ಅಂಗಡಿಗಳು (MSIL ಸೇರಿದಂತೆ), ಬೀಯರ್ ಬಾರ್‌ಗಳು, ವೈನ್ ಶಾಪ್‌ಗಳು, ಕ್ಲಬ್‌ಗಳು ಮತ್ತು ಮದ್ಯದ ಡಿಪೋಗಳನ್ನು ಕಡ್ಡಾಯವಾಗಿ ಮುಚ್ಚತಕ್ಕದ್ದು. ಈ ಅವಧಿಯಲ್ಲಿ ಯಾವುದೇ ಸಾರ್ವಜನಿಕ ಅಥವಾ ಖಾಸಗಿ ಸ್ಥಳಗಳಲ್ಲಿ ಮದ್ಯ ಮಾರಾಟ, ಸೇವನೆ ಮತ್ತು ಸಾಗಾಣಿಕೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಪರಿಸ್ಥಿತಿಗನುಗುಣವಾಗಿ ಸಾರ್ವಜನಿಕ ಶಾ...

ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಮಿತಿ ಧಾರವಾಡ ಜಿಲ್ಲಾ ಗೌರವ ಅಧ್ಯಕ್ಷರಾಗಿ ಶಿವಾಜಿ ಕಡ್ಡೆಪ್ಪವರ ನೇಮಕ

Image
ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಮಿತಿಯ ಧಾರವಾಡ ಜಿಲ್ಲಾ ಘಟಕದ ಗೌರವ ಅಧ್ಯಕ್ಷರನ್ನಾಗಿ ಶಿವಾಜಿ ನಿಂ. ಕಡ್ಡೆಪ್ಪವರ ಅವರನ್ನು ನೇಮಕ ಮಾಡಲಾಗಿದೆ.ಸಮಿತಿಯ ರಾಜ್ಯಾಧ್ಯಕ್ಷರಾದ ಆರ್. ರವಿಚಂದ್ರ ಹಾಗೂ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷರಾದ ಗಂಗಪ್ಪ ನಾ. ರೇವಡಿಹಾಳ ಇವರ ಘನ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಯಿತು. ಜಿಲ್ಲಾಮಟ್ಟದಲ್ಲಿ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಹಾಗೂ ಸಮಾಜಮುಖಿ ಕಾರ್ಯಗಳನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ಶಿವಾಜಿ ನಿಂ. ಕಡ್ಡೆಪ್ಪವರ ಅವರನ್ನು ಗೌರವ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಿ, ಅಧಿಕೃತ ಆದೇಶ ಪತ್ರವನ್ನು ಹಸ್ತಾಂತರಿಸಲಾಯಿತು.ಇದೇ ವೇಳೆ ನೂತನ ಗೌರವ ಅಧ್ಯಕ್ಷರು ಮಾತನಾಡಿ, ಸಂಘಟನೆಯ ತತ್ವ-ಸಿದ್ಧಾಂತಗಳಿಗೆ ಬದ್ಧರಾಗಿ, ಸಮಾಜ ಬಾಂಧವರನ್ನು ಒಗ್ಗೂಡಿಸಿ ಜಿಲ್ಲೆಯಾದ್ಯಂತ ಸಂಘಟನೆಯನ್ನು ಸದೃಢವಾಗಿ ಮುನ್ನಡೆಸುವುದಾಗಿ ತಿಳಿಸಿದರು. ಸಭೆಯಲ್ಲಿ ಸಮಿತಿಯ ಪ್ರಮುಖ ಪದಾಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು ಎಂದು ಜಿಲ್ಲಾಧ್ಯಕ್ಷ ಗಂಗಪ್ಪ ನಾ. ರೇವಡಿಹಾಳ ಅವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.