| 
⚡ ಮುಖ್ಯಾಂಶಗಳು
🔔 ವೇದ ಕನ್ನಡ ನ್ಯೂಸ್ ಪೋರ್ಟಲ್‌ಗೆ ಸ್ವಾಗತ! ತಾಜಾ ಸುದ್ದಿಗಳಿಗಾಗಿ ನಮ್ಮೊಂದಿಗೆ ಇರಿ.
Showing posts with the label ಕೋಳಿವಾಡ ಮಹಾಮ್ಮಾಯಿ

ಕೋಳಿವಾಡದಲ್ಲಿ ಮೈಸೂರು ದಸರಾ ಮಾದರಿಯ ನವರಾತ್ರಿ ವೈಭವ: ಮಹಾಮ್ಮಾಯಿ ದೇವಿಯ ದಿವ್ಯ ಸನ್ನಿಧಿಯಲ್ಲಿ ಅದ್ಧೂರಿ ಮಹೋತ್ಸವ, ಖಂಡೆ ಪೂಜೆ.

Image
ಸುದ್ದಿ ವಿವರ: ಹುಬ್ಬಳ್ಳಿ / ಕೋಳಿವಾಡ: ಹುಬ್ಬಳ್ಳಿ / ಕೋಳಿವಾಡ: ಕನ್ನಡ ಸಾರಸ್ವತ ಲೋಕದ ಮಹಾಕವಿ ಕುಮಾರವ್ಯಾಸರ ಜನ್ಮಸ್ಥಳ, ಐತಿಹಾಸಿಕ ಸುಕ್ಷೇತ್ರ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಕೋಳಿವಾಡ ಗ್ರಾಮದಲ್ಲಿ ಜಗನ್ಮಾತೆ, ಆದಿಶಕ್ತಿ ಶ್ರೀ ಮಹಾಮ್ಮಾಯಿ ದೇವಿಯ ಶರನ್ನವರಾತ್ರಿ ಹಾಗೂ ಮಹಾನವಮಿ ಮಹೋತ್ಸವವು ಅತ್ಯಂತ ಶ್ರದ್ಧಾ-ಭಕ್ತಿ ಹಾಗೂ ಸಡಗರ-ಸಂಭ್ರಮದಿಂದ ಜರುಗುತ್ತಿದೆ. ಮೈಸೂರು ದಸರಾವನ್ನು ನೆನಪಿಸುವಂತೆ ಕಳೆಗಟ್ಟಿರುವ ಈ ಬಾರಿಯ ನವರಾತ್ರಿ ಉತ್ಸವದಲ್ಲಿ ಇಡೀ ಗ್ರಾಮವೇ ಭಕ್ತಿ ಸಾಗರದಲ್ಲಿ ಮಿಂದೆದ್ದಿದೆ. ಐತಿಹಾಸಿಕ ಜಾಗೃತ ಕ್ಷೇತ್ರ ಕೋಳಿವಾಡ: ಹುಬ್ಬಳ್ಳಿಯಿಂದ ಸುಮಾರು 33 ಕಿ.ಮೀ ದೂರದಲ್ಲಿರುವ ಕೋಳಿವಾಡ (ಹಳೆಯ ಹೆಸರು ಕೂಕ್ಕಟಪುರ) ಗ್ರಾಮವು ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯ ಪುಣ್ಯಭೂಮಿ. ಶಿರಹಟ್ಟಿಯ ಕರ್ತೃ ಜಗದ್ಗುರು ಫಕೀರೇಶ್ವರರಿಗೆ ದಾನ ನೀಡಿ ಧನ್ಯವಾದ ಇತಿಹಾಸ ಹೊಂದಿರುವ ಶ್ರೀ ಮಹಾಮ್ಮಾಯಿ ದೇವಿ, ನಂಬಿದ ಭಕ್ತರ ಕಷ್ಟ-ಕಾರ್ಪಣ್ಯಗಳನ್ನು ಕಳೆಯುವ ಕಲ್ಪವೃಕ್ಷವಾಗಿದ್ದಾಳೆ ಎಂಬುದು ಭಕ್ತರ ಅಚಲ ವಿಶ್ವಾಸ. ವಿಶಿಷ್ಟ ಆಚರಣೆ ಹಾಗೂ 33ನೇ ವರ್ಷದ ಮಹಾಪುರಾಣ: ಹಬ್ಬದ ಆರಂಭಕ್ಕೂ ಮುನ್ನ ಆರ್ಯವ್ವ ದೇವಿಯ ಆಗಮನ, ಸುಣ್ಣ-ಬಣ್ಣಗಳಿಂದ ಸಿಂಗಾರಗೊಂಡ ದೇಗುಲ ಮತ್ತು 5ನೇ ದಿನದಂದು ನೆರೆಯ ನೀಲಗುಂದ ಗ್ರಾಮದಿಂದ ದ್ಯಾಮವ್ವ ದೇವಿಯನ್ನು ಪಲ್ಲಕ್ಕಿಯ ಮೂಲಕ ವೈಭವದಿಂದ ಬರಮಾಡಿಕೊಳ್ಳಲಾಯಿತು. ಒಂಬತ್ತು ದಿನಗಳ ಕಾಲ ದೇವಿ ...