ಜನವರಿ 1 ರಿಂದ ಕರ್ನಾಟಕದಲ್ಲಿ ಕಾಗದರಹಿತ ಆಸ್ತಿ ನೋಂದಣಿ ಕಡ್ಡಾಯ! ಹೊಸ 'ಪೇಪರ್ಲೆಸ್' ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ?
ಬೆಂಗಳೂರು (ವೇದ ಕನ್ನಡ ನ್ಯೂಸ್):
ರಾಜ್ಯದಲ್ಲಿ ಆಸ್ತಿ ನೋಂದಣಿ ಪ್ರಕ್ರಿಯೆಯನ್ನು ಇನ್ನಷ್ಟು ಸುಲಭ, ಪಾರದರ್ಶಕ ಹಾಗೂ ದಲ್ಲಾಳಿ ಮುಕ್ತಗೊಳಿಸಲು ಕರ್ನಾಟಕ ಸರ್ಕಾರ ಜನವರಿ 1, 2027 ರಿಂದ ರಾಜ್ಯಾದ್ಯಂತ ಕಾಗದರಹಿತ (Paperless) ಆಸ್ತಿ ನೋಂದಣಿ ವ್ಯವಸ್ಥೆಯನ್ನು ಜಾರಿಗೊಳಿಸುತ್ತಿದೆ. ಈ ಮೂಲಕ ಶೇ. 100ರಷ್ಟು ಕಾಗದರಹಿತ ಆಸ್ತಿ ನೋಂದಣಿ ಜಾರಿಗೊಳಿಸಿದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಲಿದೆ.
ಹೊಸ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ
ಹಂತ 1: ಕಾವೇರಿ 2.0 ಪೋರ್ಟಲ್ ಮೂಲಕ ಆನ್ಲೈನ್ನಲ್ಲಿ ಕರಡು (Draft) ಸಲ್ಲಿಕೆ.
ಹಂತ 2: ಅಧಿಕಾರಿಗಳಿಂದ ಆನ್ಲೈನ್ನಲ್ಲಿಯೇ ಪೂರ್ವ ಪರಿಶೀಲನೆ (Pre-verification)
ಹಂತ 3: ಆಧಾರ್ ಆಧಾರಿತ ಡಿಜಿಟಲ್ ಸಹಿ (e-Sign)
ಹಂತ 4: ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಕೇವಲ 5 ನಿಮಿಷಗಳ ಕೆಲಸ.
ಪ್ರಮುಖ ಅನುಕೂಲಗಳು: ಆನ್ಲೈನ್ ಶುಲ್ಕ ಪಾವತಿ ಮತ್ತು ಡಿಜಿಟಲ್ ಸಂಗ್ರಹಣೆಯಿಂದ ಮಧ್ಯವರ್ತಿಗಳ (ದಲ್ಲಾಳಿಗಳ) ಹಾವಳಿಗೆ ಸಂಪೂರ್ಣ ತಡೆ ಬೀಳಲಿದೆ. ಹಳೆ ಕಾಗದಪತ್ರಗಳು, ದಾಖಲೆಗಳು ಕಳೆದುಹೋಗುವ ಆತಂಕವಿರುವುದಿಲ್ಲ. ಇನ್ನು ಮುಂದೆ ಕಾಗದಪತ್ರಗಳ ಕಿರಿಕಿರಿ ಇಲ್ಲದೆ ಕೇವಲ 5 ನಿಮಿಷಗಳಲ್ಲಿ ನಿಮ್ಮ ಆಸ್ತಿ ನೋಂದಣಿ ಪೂರ್ಣಗೊಳ್ಳಲಿದೆ