| 
⚡ ಮುಖ್ಯಾಂಶಗಳು
🔔 ವೇದ ಕನ್ನಡ ನ್ಯೂಸ್ ಪೋರ್ಟಲ್‌ಗೆ ಸ್ವಾಗತ! ತಾಜಾ ಸುದ್ದಿಗಳಿಗಾಗಿ ನಮ್ಮೊಂದಿಗೆ ಇರಿ.

ಕವಿ ಚನ್ನಪ್ಪ ಅಂಗಡಿ ಅವರ 'ತೊಳೆದ ಕತ್ತಲು': ಬದುಕಿನ ಸಂಕಷ್ಟ ಕಳೆದು ಸಹಬಾಳ್ವೆ ಸಾರುವ ಸುಂದರ ಭಾವಗೀತೆ.

ಕವಿತೆಯ ಮುಖ್ಯಾಂಶ ಹಾಗೂ ಭಾವಾರ್ಥ:
ಚನ್ನಪ್ಪ ಅಂಗಡಿ ಅವರ 'ತೊಳೆದ ಕತ್ತಲು' ಕವಿತೆಯು ಗ್ರಾಮೀಣ ಬದುಕಿನ ನೋವು, ಸಂಕಷ್ಟ, ಜನರ ಮನದಾಳದ ಕತ್ತಲೆ ಹಾಗೂ ಕಾಲಕ್ರಮೇಣ ಎಲ್ಲ ಕಷ್ಟಗಳೂ ಕಳೆದು ಸಮಾಜದಲ್ಲಿ ಸಹಬಾಳ್ವೆ ಮೂಡುವ ಆಶಯವನ್ನು ಗಹನವಾಗಿ ಬಿಂಬಿಸುತ್ತದೆ. ಊರು-ಕೇರಿಗಳ ಕಷ್ಟಗಳು, ಅಂತೆ-ಕಂತೆಗಳ ಮಾತುಗಳು ಮತ್ತು ಬದುಕಿನ ಏರಿಳಿತಗಳನ್ನು ಮೆಟ್ಟಿನಿಂತು ಕಾಲ ಕಳೆಯುವ ವಾಸ್ತವವನ್ನು ಕವಿತೆಯ ಆರಂಭದಲ್ಲಿ ಕಟ್ಟಿಕೊಡಲಾಗಿದೆ. ಬಿಸಿಲು, ದಣಿವು ಮತ್ತು ಬದುಕಿನ ಹಾದಿಯಲ್ಲಿ ಎದುರಾಗುವ ಸಂಕಟಗಳನ್ನು ಕತ್ತಲಿಗೆ ಹೋಲಿಸಲಾಗಿದೆ. ಕೊನೆಯಲ್ಲಿ, ಭೂಮಿಯು ಮಳೆಗಾಗಿ ಕಾಯುವಂತೆ ಬದುಕು ಭರವಸೆಯಿಂದ ಕಾಯುತ್ತಿದ್ದು, ಸಮಸ್ತ ಊರು-ಮನೆಗಳಲ್ಲಿ ದ್ವೇಷ ಕಳೆದು, ಪರಸ್ಪರ ಕೈಜೋಡಿಸಿ ಪ್ರೀತಿ-ಸಹಬಾಳ್ವೆಯ ಬೆಳೆ ಬೆಳೆಯಬೇಕು ಎಂಬ ಉದಾತ್ತ ಸಂದೇಶದೊಂದಿಗೆ ಕವಿತೆ ಮುಕ್ತಾಯವಾಗುತ್ತದೆ.

ಕವಿತೆಯ ಸಾಲುಗಳು: ಆ ಊರು-ಕೇರಿ ಮನೆ-ಅಂಗಳ ಎಲ್ಲೆಡೆಯೆಂತೆ ಸಿವುಡು ಕಟ್ಟಿ ಹೊರಬೇಕಾಗಿಲ್ಲ ಯಾರೂ ಅಂತೆಕಂತೆ ಹಿತ್ತಲಬಾಗಿಲು ‘ತಲೆಬಾಗ’ಲು ನಮ್ಮ ನಿಮ್ಮಂತೆ ಬಿರುಕಿನೊಳಗೆ ಮಾಸಿದ ಕತ್ತಲು ಕಾಲ ಕಳೆದಂತೆ ಊರನಡುವಿನ ರಸ್ತೆಯಲ್ಲಿ ನಡೆದು ಗೋಗುವಲ್ಲಿ ಬಿರುಬಿಸಿಲಿನಲ್ಲಿ ಕಾಯುತ ಕಣ್ಣಕವಿದ ಕತ್ತಲಲ್ಲಿ ಹೋಗುವಾಗ ಬರೂವಾಗ ತೆರೆದುನಿಂತ ಬಾಗಿಲಲ್ಲಿ ಅಲುಗಾಡದ ಚಿತ್ತಾರ ಇಳಿಬಿದ್ದ ಪರದೆಯಲ್ಲಿ ಆ ಬದಿ ಈ ಬದಿ ಹೆಗಲುಗೊಟ್ಟ ಹಾಸುಗಲ್ಲು ಅಂಚಗುಂಟ ಅರಳಿನಿಂತ ಉಪದ್ರವದ ಕಡ್ಡಿಹುಲ್ಲು ಗಂಧಗಾಳಿ ಭ್ರಷ್ಟಗೊಂಡು ಕಿವಿಕಚ್ಚುವ ಗುಲ್ಲುಗುಲ್ಲು ಪ್ರಾಯವೇರಿ ಬಿಸಿತಾಕಿ ಕರಗುವಂತ ಚೆಲ್ಲುಚೆಲ್ಲು ಬದುಕೆಂಬುದೊಂದು ನಿಂತು ಕಾಯುತಿದೆ ಇಳೆಯಾಗಿ ಹದಗೊಂಡ ಕಾಲಕೆ ದಯತೋರಿ ಮಳೆಯಾಗಿ ಊರಮನೆ ಹಾದಿಹೊಲ ಸಹಬಾಳ್ವೆಯ ಬೆಳೆಯಾಗಿ ಕೈಗೆ ಕೈಯ್ಯಿ ಕೂಡಿಯಾಡಿ ಜೀವನದ ಬಳುವಳಿಯಾಗಿ — ಕವಿ ಚನ್ನಪ್ಪ ಅಂಗಡಿ