| 
⚡ ಮುಖ್ಯಾಂಶಗಳು
🔔 ವೇದ ಕನ್ನಡ ನ್ಯೂಸ್ ಪೋರ್ಟಲ್‌ಗೆ ಸ್ವಾಗತ! ತಾಜಾ ಸುದ್ದಿಗಳಿಗಾಗಿ ನಮ್ಮೊಂದಿಗೆ ಇರಿ.

ಟೆಸ್ಟ್ ಕ್ರಿಕೆಟ್‌ಗೆ ಮೊಹಮ್ಮದ್ ಶಮಿ ವಿದಾಯ: 13 ವರ್ಷಗಳ ಪಯಣಕ್ಕೆ ತೆರೆ.

Image
ಚೊಚ್ಚಲ ಟೆಸ್ಟ್ ಆಡಿದ ದಿನವೇ ನಿವೃತ್ತಿ ಘೋಷಿಸಿದ ಶಮಿ; 64 ಪಂದ್ಯಗಳಲ್ಲಿ 229 ವಿಕೆಟ್ ಸಾಧನೆ – 13 ವರ್ಷಗಳ ಟೆಸ್ಟ್ ಪಯಣ ಮುಕ್ತಾಯ – ಭಾವನಾತ್ಮಕ ಸಂದೇಶದೊಂದಿಗೆ ಶಮಿ ನಿವೃತ್ತಿ. ನವದೆಹಲಿ: ಭಾರತದ ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. 13 ವರ್ಷಗಳ ಕಾಲ ಭಾರತದ ಟೆಸ್ಟ್ ತಂಡದ ಪ್ರಮುಖ ವೇಗದ ಬೌಲರ್‌ಗಳಲ್ಲಿ ಒಬ್ಬರಾಗಿದ್ದ ಶಮಿ, ನವೆಂಬರ್ 6ರಂದು ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಸಂದೇಶ ಹಂಚಿಕೊಳ್ಳುವ ಮೂಲಕ ತಮ್ಮ ಟೆಸ್ಟ್ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ. ಆದರೆ ಕ್ರಿಕೆಟ್‌ನಿಂದ ಸಂಪೂರ್ಣ ನಿವೃತ್ತಿಯಾಗುತ್ತಿಲ್ಲ, ಏಕದಿನ ಮತ್ತು ಟಿ20 ಸೇರಿದಂತೆ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಮುಂದುವರಿಯುವುದಾಗಿ ಸ್ಪಷ್ಟಪಡಿಸಿದ್ದಾರೆ. ಚೊಚ್ಚಲ ಟೆಸ್ಟ್ ಆಡಿದ ದಿನವೇ ನಿವೃತ್ತಿ ಘೋಷಣೆ : ಶಮಿಯವರ ನಿವೃತ್ತಿ ಘೋಷಣೆಗೆ ವಿಶೇಷ ಮಹತ್ವವಿದೆ. ಅವರು 2013ರ ನವೆಂಬರ್ 6ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಸರಿಯಾಗಿ 13 ವರ್ಷಗಳ ಬಳಿಕ ಅದೇ ದಿನ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ತಮ್ಮ ಮೊದಲ ಟೆಸ್ಟ್‌ನಲ್ಲೇ ಒಂಬತ್ತು ವಿಕೆಟ್‌ಗಳನ್ನು ಕಬಳಿಸಿ ಗಮನ ಸೆಳೆದಿದ್ದ ಅವರು, ನಂತರ ಭಾರತದ ವೇಗದ ಬೌಲಿಂಗ್ ವಿಭಾಗದ ವಿಶ್ವಾಸಾರ್ಹ ಅಸ್ತ್ರವಾಗಿ ಬೆಳೆದರು. 64 ಟೆಸ್ಟ್ ಪಂದ್ಯಗಳಲ್ಲಿ 229 ...

ಕಲಘಟಗಿ: ನರಿ ಕಡಿತದಿಂದ ರೈತ ಸಾವು ಪ್ರಕರಣ – ಸ್ಥಳಕ್ಕೆ ಭೇಟಿ ನೀಡಿ ಜಂಟಿ ಪರಿಶೀಲನೆ ನಡೆಸಿದ ಅರಣ್ಯ ಇಲಾಖೆ ಉನ್ನತಾಧಿಕಾರಿಗಳು.

Image
ಕಲಘಟಗಿ / ಧಾರವಾಡ: ತಾಲೂಕಿನ ಸೋಮನಕೊಪ್ಪ ಗ್ರಾಮದಲ್ಲಿ ಜಮೀನಿಗೆ ತೆರಳಿದ್ದ ವೇಳೆ ನರಿ ದಾಳಿಗೊಳಗಾಗಿ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದ ರೈತ ಗಣೇಶಪ್ಪ ಬಸಪ್ಪ ಬಾರಕೇರ (65) ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ, ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳ ತಂಡವು ಘಟನಾ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಜಂಟಿ ಸ್ಥಳ ಪರಿಶೀಲನೆ ಹಾಗೂ ಮಹಜರು ನಡೆಸಿದೆ. ತಾಲೂಕಿನಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಈ ದುರಂತ ಘಟನೆಗೆ ಸಂಬಂಧಿಸಿದಂತೆ, ಸರ್ಕಾರದ ವನ್ಯಜೀವಿ ಪರಿಹಾರ ವಿತರಣೆಯಲ್ಲಿ ಎದುರಾಗಿದ್ದ ತಾಂತ್ರಿಕ ತೊಡಕುಗಳ ಬೆನ್ನಲ್ಲೇ ಈ ಮಹತ್ವದ ತನಿಖೆ ನಡೆದಿದೆ. ಘಟನೆಯ ಹಿನ್ನೆಲೆ: ಸೋಮನಕೊಪ್ಪ ಗ್ರಾಮದ ರೈತ ಗಣೇಶಪ್ಪ ಬಾರಕೇರ ಅವರು ಆಗಸ್ಟ್ 17 2025 ರಂದು ಜಮೀನಿನಲ್ಲಿ ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಏಕಾಏಕಿ ನರಿ ದಾಳಿ ನಡೆಸಿತ್ತು. ಮುಖ, ಕೈ-ಕಾಲು ಸೇರಿದಂತೆ ದೇಹದ ಎಲ್ಲೆಡೆ ಕಚ್ಚಿ ಗಂಭೀರವಾಗಿ ಗಾಯಗೊಳಿಸಿತ್ತು. ತಕ್ಷಣವೇ ಅವರನ್ನು ಕಲಘಟಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ನಂತರದ ದಿನಗಳಲ್ಲಿ ಗಾಯದ ನೋವು ತೀವ್ರಗೊಂಡ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಕಿಮ್ಸ್ (KIMS) ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಿಸದೆ ಅವರು ಸೆಪ್ಟೆಂಬರ್ 13 2025 ರಂದು ಮೃತಪಟ್ಟಿದ್ದರು. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿಯೂ ದೂರು ದಾಖಲಾಗಿತ್ತು. ಪರಿಹಾರಕ್ಕಾಗಿ ಪತ್ನಿಯ ಅರ್ಜಿ – ಎಲ್...

ಧಾರವಾಡ: 'ವೇದ ಕನ್ನಡ ನ್ಯೂಸ್' ಡಿಜಿಟಲ್ ಸುದ್ದಿ ಸಂಸ್ಥೆಗೆ ಅಧಿಕೃತ ಮಾನ್ಯತೆ ಪ್ರಕ್ರಿಯೆ ಚುರುಕು | ವಾರ್ತಾ ಇಲಾಖೆಗೆ ಅಪರ ಜಿಲ್ಲಾಧಿಕಾರಿಗಳ ಮಹತ್ವದ ಸೂಚನೆ.

Image
ಧಾರವಾಡ (ವೇದ ಕನ್ನಡ ನ್ಯೂಸ್): ಧಾರವಾಡ ಜಿಲ್ಲೆಯಲ್ಲಿ ಮುಂಚೂಣಿಯಲ್ಲಿ ಕಾರ್ಯಾಚರಿಸುತ್ತಿರುವ ಸ್ವತಂತ್ರ ಡಿಜಿಟಲ್ ಸುದ್ದಿ ಮಾಧ್ಯಮ ಸಂಸ್ಥೆಯಾದ ‘ವೇದ ಕನ್ನಡ ನ್ಯೂಸ್’ (Veda Kannada News) ಅನ್ನು ಸರ್ಕಾರದ ಅಧಿಕೃತ ಮಾಧ್ಯಮ ಪ್ರಕಟಣೆಗಳ ಪಟ್ಟಿಗೆ ಸೇರ್ಪಡೆಗೊಳಿಸುವ ಪ್ರಕ್ರಿಯೆಗೆ ಮಹತ್ವದ ಚಾಲನೆ ದೊರೆತಿದೆ. ಸಂಸ್ಥೆಯ ಸಂಸ್ಥಾಪಕರು ಮತ್ತು ಸಂಪಾದಕರಾದ ಶ್ರೀ ಶಿವಾನಂದ ಹಡಪದ ಅವರು ದಿನಾಂಕ:25-09-2026 ರಂದು ಸಲ್ಲಿಸಿದ್ದ ಅಧಿಕೃತ ಮನವಿಯನ್ನು ಪುರಸ್ಕರಿಸಿರುವ ಧಾರವಾಡ ಜಿಲ್ಲಾಧಿಕಾರಿಗಳ ಕಾರ್ಯಾಲಯವು, ಈ ಕುರಿತು ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದೆ. ಅಪರ ಜಿಲ್ಲಾಧಿಕಾರಿಗಳಾದ ಶ್ರೀಮತಿ ಸಿ. ಡಿ. ಗೀತಾ ಅವರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಧಾರವಾಡ ಜಿಲ್ಲಾ ಸಹಾಯಕ ನಿರ್ದೇಶಕರಿಗೆ ಅಧಿಕೃತ ಮಾಹಿತಿ ಪತ್ರ (ಸಂಖ್ಯೆ: ಜೆ.ಪಿ.ಎನ್/ಸಿಆರ್/2026-27/ಇ-557137) ರವಾನಿಸಿದ್ದಾರೆ. ಅರ್ಜಿದಾರರ ಅರ್ಜಿಯಲ್ಲಿನ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿ ನಿಯಮಾನುಸಾರ ಸೂಕ್ತ ಕ್ರಮಕೈಗೊಂಡು, ಪೂರಕ ದಾಖಲೆಗಳೊಂದಿಗೆ ಕೂಡಲೇ ಮಾಹಿತಿಯನ್ನು ಈ ಕಾರ್ಯಾಲಯಕ್ಕೆ ಸಲ್ಲಿಸಲು ಪತ್ರದಲ್ಲಿ ಸ್ಪಷ್ಟವಾಗಿ ಸೂಚಿಸಲಾಗಿದೆ. ಗ್ರಾಮೀಣ ಭಾಗದ ಜನಪರ ಸಮಸ್ಯೆಗಳು, ರೈತರ ಧ್ವನಿ, ಕಾರ್ಮಿಕರ ಹಿತಾಸಕ್ತಿ ಹಾಗೂ ಸರ್ಕಾರದ ವಿವಿಧ ಜನಕಲ್ಯಾಣ ಯೋಜನೆಗಳನ್ನು ಸಾರ್ವಜನಿಕರಿಗೆ ನಿಖರವಾಗಿ ತಲುಪಿಸುವ ಧ್ಯೇಯ ಹೊಂದಿರುವ 'ವೇದ ಕನ್ನಡ...

ಹುಬ್ಬಳ್ಳಿ: ಕೊಳಿವಾಡದಲ್ಲಿ ವೀರಭದ್ರೇಶ್ವರ ಟ್ರೇಡರ್ಸ್‌ನಿಂದ 3ನೇ ವರ್ಷದ ಕನ್ನಡ ರಾಜ್ಯೋತ್ಸವ ಸಂಭ್ರಮ | ಮಾಲೀಕ ವೀರೇಶ ಸೂಸರವಿ ಉಪಸ್ಥಿತಿ | ವೇದ ಕನ್ನಡ ನ್ಯೂಸ್.

Image
ಹುಬ್ಬಳ್ಳಿ (ವೇದ ಕನ್ನಡ ನ್ಯೂಸ್): ಹುಬ್ಬಳ್ಳಿ ತಾಲ್ಲೂಕಿನ ಕೊಳಿವಾಡ ಗ್ರಾಮದಲ್ಲಿ ವೀರಭದ್ರೇಶ್ವರ ಟ್ರೇಡರ್ಸ್ ವತಿಯಿಂದ 3ನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಅತ್ಯಂತ ಸಡಗರ ಹಾಗೂ ವಿಜೃಂಭಣೆಯಿಂದ ಆಚರಿಸಲಾಯಿತು.ಕಾರ್ಯಕ್ರಮದ ಆರಂಭದಲ್ಲಿ ತಾಯಿ ಭುವನೇಶ್ವರಿ ದೇವಿ ಹಾಗೂ ನಾಡಧ್ವಜಕ್ಕೆ ವಿಶೇಷ ಪೂಜೆ ಸಲ್ಲಿಸಿ, ಕನ್ನಡದ ಬಾವುಟವನ್ನು ಹಾರಿಸಿ ಗೌರವ ಸಮರ್ಪಿಸಲಾಯಿತು. ಸ್ಥಳೀಯ ಮಹಿಳೆಯರು ಸುಂದರ ರಂಗೋಲಿಗಳನ್ನು ಬಿಡಿಸಿ ಸಂಭ್ರಮಿಸಿದರೆ, ವೇದಿಕೆಯಲ್ಲಿ ಮಕ್ಕಳಿಂದ ಆಕರ್ಷಕ ಸಾಂಸ್ಕೃತಿಕ ಗಾಯನ ಮತ್ತು ನೃತ್ಯ ಕಾರ್ಯಕ್ರಮಗಳು ಜರುಗಿದವು. ನಾಡಿನ ಸೇವೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಶ್ರಮಿಸಿದ ಗಣ್ಯರಿಗೆ ಗೌರವ ಸನ್ಮಾನ ನೆರವೇರಿಸಿ, ಸಾರ್ವಜನಿಕರಿಗೆ ಅನ್ನಸಂತರ್ಪಣೆ ಮಾಡಲಾಯಿತು. ಗಣ್ಯರ ಉಪಸ್ಥಿತಿ : ಕಾರ್ಯಕ್ರಮದಲ್ಲಿ ವೀರಭದ್ರೇಶ್ವರ ಟ್ರೇಡರ್ಸ್ ಮಾಲೀಕರಾದ ಶ್ರೀ ವೀರೇಶ ಸೂಸರವಿ, ಕಾಯಕ ಮಿತ್ರ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಸಂಘ, ನವಲಗುಂದ ಅಧ್ಯಕ್ಷರಾದ ಶ್ರೀ ಶಶಿಕುಮಾರ ದೊಡ್ಡಮನಿ, ಕಾರ್ಮಿಕ ಮುಖಂಡರು, ಸಂಘಟನೆಯ ಪದಾಧಿಕಾರಿಗಳು ಹಾಗೂ ಗ್ರಾಮದ ಪ್ರಮುಖ ಹಿರಿಯರು ಉಪಸ್ಥಿತರಿದ್ದು ನಾಡು-ನುಡಿ ಹಾಗೂ ಕಾರ್ಮಿಕರ ಕ್ಷೇಮಾಭಿವೃದ್ಧಿಯ ಕುರಿತು ಶುಭ ಹಾರೈಸಿದರು.

ಬೆಳಕು ಫೌಂಡೇಶನ್‌ನಿಂದ ಅದ್ಧೂರಿ ಕನ್ನಡ ರಾಜ್ಯೋತ್ಸವ: ಕವಿಗಳಿಗೆ ಸನ್ಮಾನ, ಕಟ್ಟಡ ಕಾರ್ಮಿಕರ ಹಿತರಕ್ಷಣೆಗೆ ಮುಖಂಡರ ಆಗ್ರಹ.

Image
ಧಾರವಾಡ: ನಗರದಲ್ಲಿ ಬೆಳಕು ಫೌಂಡೇಶನ್ ಹಾಗೂ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ 71ನೇ ಕನ್ನಡ ರಾಜ್ಯೋತ್ಸವ ಹಾಗೂ ಕವಿಗೋಷ್ಠಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.ಈ ಸಂದರ್ಭದಲ್ಲಿ 'ವೇದ ಕನ್ನಡ ನ್ಯೂಸ್' ಜೊತೆ ಮಾತನಾಡಿದ ಬೆಳಕು ಫೌಂಡೇಶನ್ ಸಂಸ್ಥಾಪಕಿ ಜ್ಯೋತಿ ಪತ್ತಾರ ಅವರು, "ಮೊದಲ ವರ್ಷದ ರಾಜ್ಯೋತ್ಸವ ಅಂಗವಾಗಿ ಕವಿಗೋಷ್ಠಿಯನ್ನು ಆಯೋಜಿಸಲಾಗಿದ್ದು, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಲಿಂಗರಾಜ ಅಂಗಡಿಯವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ನಾಡಿನ 5 ಮಂದಿ ಕವಿಗಳನ್ನು ಗೌರವಿಸಿ ಸನ್ಮಾನಿಸಲಾಗಿದೆ. ಕವಿಗಳ ಮೂಲಕ ಜನರಲ್ಲಿ ಕನ್ನಡದ ಕಂಪು ಹಾಗೂ ಅಭಿಮಾನ ಮೂಡಿಸುವ ಸದುದ್ದೇಶ ನಮ್ಮದಾಗಿದೆ," ಎಂದು ತಿಳಿಸಿದರು. ಕಾರ್ಮಿಕರ ಹಿತರಕ್ಷಣೆಗೆ ಒಕ್ಕೂಟದ ಪಣ: ಒಕ್ಕೂಟದ ಮುಖಂಡರು ಶಿವಾನಂದ ಅಸೂಟಿ ಅವರು ಮಾತನಾಡಿ, "ಕಟ್ಟಡ ಕಾರ್ಮಿಕರಿಗೆ ಯಾವುದೇ ಅನ್ಯಾಯವಾದಲ್ಲಿ ಅಥವಾ ಸೌಲಭ್ಯಗಳು ಸಿಗದಿದ್ದಲ್ಲಿ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿ ಕಾರ್ಮಿಕರಿಗೆ ನ್ಯಾಯ ಕೊಡಿಸಲಾಗುವುದು ಎಂದು ತಿಳಿಸಿದರು. ಧಾರವಾಡ ಜಿಲ್ಲಾ ಕಾರ್ಮಿಕ ಘಟಕದ ಜಿಲ್ಲಾ ಕಾರ್ಯಧ್ಯಕ್ಷರು: ಶ್ರೀ ಲಕ್ಷ್ಮಣ ಸಿ ರಾಜಾಪೂರ ಧಾರವಾಡ ಜಿಲ್ಲಾ ಕಾರ್ಮಿಕ ಘಟಕದ ಜಿಲ್ಲಾ ಕಾರ್ಯಧ್ಯಕ್ಷರು ಮಾತನಾಡಿ ಕಾರ್ಮಿಕ ಇಲಾಖೆಯಲ್ಲಿ ಬೋಗಸ್ ಕಾರ್ಡ್‌ಗಳನ್ನು ಪತ್...

ಧಾರವಾಡ: ರೈತನಿಂದ ಲಂಚ ಪಡೆಯುತ್ತಿದ್ದ ಹೆಸ್ಕಾಂ ಎಇಇ ಗುಲ್ಜಾರ್ ಲೋಕಾಯುಕ್ತ ಬಲೆಗೆ!

Image
ಸುದ್ದಿ ವಿವರ: ಧಾರವಾಡ: ಕೃಷಿ ಪಂಪ್‌ಸೆಟ್ ಅಥವಾ ವಿದ್ಯುತ್ ಕಾಮಗಾರಿಗೆ ಸಂಬಂಧಿಸಿದಂತೆ ರೈತನೊಬ್ಬನಿಂದ ಲಂಚ ಪಡೆಯುತ್ತಿದ್ದ ಹೆಸ್ಕಾಂ (HESCOM) ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (AEE) ಗುಲ್ಜಾರ್ ಅವರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.ಕೆಲಸ ಮಾಡಿಕೊಡಲು ಅಧಿಕಾರಿಯು ಹಣಕ್ಕೆ ಬೇಡಿಕೆ ಇಟ್ಟಿದ್ದ ಹಿನ್ನೆಲೆಯಲ್ಲಿ ಸಂತ್ರಸ್ತ ರೈತ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು, ಹಣ ಸ್ವೀಕರಿಸುವಾಗಲೇ ಅಧಿಕಾರಿಯನ್ನು ರೆಡ್‌ಹ್ಯಾಂಡ್‌ ಆಗಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಕಬ್ಬಿಗೆ ₹5,500 ದರ ನಿಗದಿಗೆ ಆಗ್ರಹ: ಮನಸೂರು ಶ್ರೀಗಳ ನೇತೃತ್ವದಲ್ಲಿ ನಿಗದಿ ಬಳಿ ಹೆದ್ದಾರಿ ಬಂದ್; ರೈತರ ತೀವ್ರ ಆಕ್ರೋಶ.

Image
ಧಾರವಾಡ: ಧಾರವಾಡ: ಪ್ರಸಕ್ತ ಸಾಲಿನ ಕಬ್ಬಿಗೆ ಕನಿಷ್ಠ ₹5,500 ಬೆಂಬಲ ಬೆಲೆ ಘೋಷಿಸಬೇಕೆಂದು ಆಗ್ರಹಿಸಿ, ಧಾರವಾಡ ತಾಲೂಕಿನ ನಿಗದಿ ಗ್ರಾಮದ ಬಳಿ ಹಳಿಯಾಳ-ದಾಂಡೇಲಿ ರಾಜ್ಯ ಹೆದ್ದಾರಿಯನ್ನು ತಡೆದು ಕಬ್ಬು ಬೆಳೆಗಾರರು ಬೃಹತ್ ರಸ್ತೆ ತಡೆ ಧರಣಿ ನಡೆಸಿದರು. ಈ ಪ್ರತಿಭಟನೆಯಲ್ಲಿ ಮನಸೂರು ರೇವಣಸಿದ್ದೇಶ್ವರ ಸ್ವಾಮೀಜಿಗಳು ಮುಂಚೂಣಿಯಲ್ಲಿ ನಿಂತು ರೈತರ ಹೋರಾಟಕ್ಕೆ ಸಂಪೂರ್ಣ ಬೆಂಬಲ ಸೂಚಿಸಿದರು. ಸಂಜೆ 6 ಗಂಟೆಯೊಳಗೆ ದರ ಘೋಷಣೆಗೆ ಸ್ವಾಮೀಜಿಗಳ ಗಡುವು: ಧರಣಿ ಸ್ಥಳದಲ್ಲಿ ಮಾತನಾಡಿದ ಮನಸೂರು ರೇವಣಸಿದ್ದೇಶ್ವರ ಸ್ವಾಮೀಜಿಗಳು, "ಬರಗಾಲ, ಕಟಾವು ಮತ್ತು ಸಾಗಾಣಿಕೆ ವೆಚ್ಚದಿಂದಾಗಿ ಕಬ್ಬು ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಪೆಟ್ರೋಲ್, ಡೀಸೆಲ್ ದರ ಮತ್ತು ಜನಪ್ರತಿನಿಧಿಗಳ ವೇತನವನ್ನು ಯಾವುದೇ ಚರ್ಚೆಯಿಲ್ಲದೆ ಹೆಚ್ಚಿಸುವ ಸರ್ಕಾರಗಳು ರೈತರ ಬೆವರಿಗೆ ಬೆಲೆ ಕಟ್ಟಲು ಮೀನಮೇಷ ಎಣಿಸುತ್ತಿವೆ. ಸರ್ಕಾರಕ್ಕೆ ಬೊಕ್ಕಸದಲ್ಲಿ ಹಣವಿಲ್ಲವೆಂದರೆ ಅಗತ್ಯವಿಲ್ಲದ ಗ್ಯಾರಂಟಿಗಳನ್ನು ನಿಲ್ಲಿಸಲಿ, ಆದರೆ ಅನ್ನದಾತನಿಗೆ ನ್ಯಾಯಯುತ ಹಣ ನೀಡಲೇಬೇಕು. ಮುಖ್ಯಮಂತ್ರಿಗಳು, ಸಕ್ಕರೆ ಕಾರ್ಖಾನೆ ಮಾಲೀಕರು ಮತ್ತು ಸಚಿವರು ಇವತ್ತು ಸಂಜೆ 6 ಗಂಟೆಯೊಳಗೆ ₹5,500 ದರ ಘೋಷಿಸಬೇಕು; ಇಲ್ಲವಾದಲ್ಲಿ ಮುಂದೆ ನಡೆಯುವ ಯಾವುದೇ ಅನಾಹುತಕ್ಕೂ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ," ಎಂದು ನೇರ ಎಚ್ಚರಿಕೆ ನೀಡಿದರು. ಸರ್ಕಾರದ ವಿರುದ್ಧ ರೈತ ಮುಖಂಡರ ಆಕ್ರೋಶ: ಪ್...